-
My Cart:
Rs. 0.00 0My Cart
0 ItemsYour cart is empty
ಮಹಾತಪಸ್ವಿಗಳೂ ಅಸಾಮಾನ್ಯ ಗುರುಗಳೂ ಆಗಿದ್ದ ಶ್ರೀ ಶ್ರೀ ಚಂದ್ರಶೇಖರ ಭಾರತೀ ಸ್ವಾಮೀಜಿಯವರ ಜೀವನ ಸಂದೇಶಗಳ ಮಹಿಮೆ ಮಹಾತ್ಮಗಳನ್ನು ಸುಲಲಿತ ಸುಂದರ ನೇರ ನುಡಿಯಲ್ಲಿ ಈ ಗ್ರಂಥದ ಮೂಲಕ ಈ ನಾಡಿಗೆ ನೀಡಿದ್ದಾರೆ. ಶ್ರೀ. ಲ. ನ. ಶಾಸ್ತ್ರಿಗಳು. ಈಗಾಗಲೇ ಸಂತ ಮಹಾತ್ಮರ ಹಲವು ದಿವ್ಯ ಜೀವನ ಕತೆಗಳನ್ನು ಬರೆದು ಕನ್ನಡ ನಾಡಿನ ಆಧ್ಯಾತ್ಮಿಕ ಸಾಹಿತ್ಯವನ್ನು ಶ್ರೀಮಂತಗೊಳಿಸಿ ಖ್ಯಾತನಾಮರೂ ಸಿದ್ಧಹಸ್ತರೂ ಆಗಿರುವ ಶ್ರೀ ಶಾಸ್ತ್ರಿಗಳು ಇದೀಗ ಈ ಬರಹದ ಮೂಲಕ ಶ್ರದ್ಧಾಳುಗಳಿಗೂ ಮುಮುಕ್ಷುಗಳಿಗೂ ಮಹದುಪಕಾರ ಮಾಡಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಈ ಗ್ರಂಥವನ್ನು ಓದುವವರ ಪಾಲಿಗೆ ಈ ಮಹಾಯೋಗಿಯ ಸಾನಿಧ್ಯದಲ್ಲೇ ನಡೆದಾಡಿದ ಅನುಭವವಾಗುತ್ತದೆ. ಅವರ ಅಮರವಾಣಿಯನ್ನು ಆಲಿಸಿದ ಅನುಭವವಾಗುತ್ತದೆ. ಒಂದು ಅಪೂರ್ವ ಅಸದೃಶ್ಯ ಸತ್ಸಂಗ ದೊರೆಯುತ್ತದೆ. ಸುತ್ತಲೂ ಗಾಳಿ ಇರುವುದು ಕಣ್ಣಿಗೆ ಕಾಣಿಸದು. ಮರಗಳ ಅಲುಗಾಟದಿಂದ ಗಾಳಿಯ ಇರುವಿನ ಅರಿವು ಸ್ಪಷ್ಟವಾಗುವುದು. ಅಂತೆಯೇ ಸರ್ವತ್ರ ಸರ್ವವ್ಯಾಪಿಯಾಗಿರುವ ಭಗವಂತನ ಅಸ್ತಿತ್ವ ಸಂತ ಮಹಾತ್ಮರ ಜೀವನೋಪದೇಶಗಳಿಂದ ತಿಳಿದು ಬರುವುದು. ಅದರಿಂದಲೇ ಅವನ ಮಹಿಮೆಯ ಅರಿವಾಗುವುದು. ಅವನನ್ನು ಪಡೆಯುವ ದಾರಿ ತೆರೆದುಕೊಳ್ಳುವುದು.
Device | White | Black | Red | Green |
---|---|---|---|---|
Chair | 14-14.5 | 15-15.5 | 16-16.5 | 17-17.5 |
Moniter | 14-14.5 | 15-15.5 | 16-16.5 | 17-17.5 |
Keycaps | 14-14.5 | 15-15.5 | 16-16.5 | 17-17.5 |
CPU | 14-14.5 | 15-15.5 | 16-16.5 | 17-17.5 |
Mouse | 14-14.5 | 15-15.5 | 16-16.5 | 17-17.5 |