-
My Cart:
Rs. 0.00 0My Cart
0 ItemsYour cart is empty
ಶ್ರೀ ಶ್ರೀಗಳು ತಮ್ಮ ವಿಜಯಯಾತ್ರಾಕಾಲದಲ್ಲಿ ಅನೇಕ ದೇವತಾ ಮೂರ್ತಿಗಳನ್ನು ಹಲವು ಕ್ಷೇತ್ರಗಳಲ್ಲಿ ಪ್ರತಿಷ್ಠಾಪಿಸಿದರು. ಅವರು ಸಂದರ್ಶಿಸಿದ ಕ್ಷೇತ್ರಗಳಲ್ಲೆಲ್ಲಾ ದೇವತಾ ಸ್ತೋತ್ರಗಳನ್ನು ರಚಿಸಿದರು. ಅವರು ರಚಿಸಿದ ಸ್ತೋತ್ರಗಳ ಸಂಕಲನವೇ 'ಭಕ್ತಿಸುಧಾತರಂಗಿಣಿ', ಸಕಲ ದೇವತಾ ಸ್ತುತಿಗಳಿರುವ ಈ ಗ್ರಂಥದಲ್ಲಿ ಶ್ರೀಶಾರದಾಂಬೆಯ ಸ್ತುತಿಗಳು ಪ್ರಮುಖವಾಗಿವೆ. ಈ ಸ್ತೋತ್ರಗಳನ್ನು ಪಠಿಸುತ್ತಿದ್ದರೆ ಶ್ರೀಶ್ರೀಗಳೇ ಸಾಕ್ಷಾತ್ ಶ್ರೀಶಂಕರಭಗವತ್ಪಾದರು ಎಂದೆನಿಸದಿರದು ಮತ್ತು ಅವರು ಶ್ರೀಶಾರದಾಂಬೆಯ ಸ್ವಂತ ಮಕ್ಕಳೆಂದೂ ಖಚಿತವಾಗುವುದು. ಹೆಸರಿಗೆ ತಕ್ಕಂತೆ ಈ ಸ್ತೋತ್ರಗಳು ಪಾಠಕರನ್ನು ಭಕ್ತಿಯೆಂಬ ಅಲೆಗಳ ಮೇಲೆ ತೇಲಿಸುತ್ತಾ ಪರಮಾನಂದವನ್ನು ಉಂಟುಮಾಡುತ್ತವೆ. ಮನೋಹರವಾದ ಈ ಸ್ತೋತ್ರಗಳಲ್ಲಿ, ತಾಯಿಗೆ ಮಗುವಿನ ನುಡಿಗಳೇ ಆನಂದದಾಯಕವೆಂಬಂತೆ, ಶ್ರೀಶ್ರೀಗಳು ಭಕ್ತನು ತನ್ನ ಮನಸ್ಸನ್ನು ದೇವರೆದುರು ಹೇಗೆ ತೋಡಿಕೊಳ್ಳಬೇಕೆಂದು ಸರಳವಾಗಿ ಸುಂದರವಾಗಿ ನಿರೂಪಿಸಿದ್ದಾರೆ. ಪರಮಾನಂದವೇ ಪ್ರಾಪ್ತವಾದ ಬಳಿಕ, ಲೌಕಿಕ ಸಾಹಿತ್ಯಗಳ ದೃಷ್ಟಿಕೋನದಲ್ಲಿ ಈ ಕೃತಿಯ ವಿಮರ್ಶೆಯು ಅನಾವಶ್ಯಕ ಮತ್ತು ಅಪರಾಧವೂ ಕೂಡ. ಪರಮಾತ್ಮನ ಅನುಗ್ರಹವಾದರೆ ಮೂಕನೂ ಕೂಡ ಪಂಡಿತನಾಗುವನು, ಯೋಗಿಯಾಗುವನು, ಮೋಕ್ಷವನ್ನು ಪಡೆಯುವನು ಎಂಬುದನ್ನು ಬಾರಿ ಬಾರಿಗೂ ಘೋಷಿಸುತ್ತಾ ಪರಮಾತ್ಮನಲ್ಲಿ ಭಕ್ತಿಯನ್ನು ಬೆಳೆಸಿಕೊಳ್ಳುವುದೊಂದೇ ಮುಖ್ಯವೆಂದು ಸಾರುತ್ತಿರುವ ಸ್ತೋತ್ರಗುಚ್ಛವು ಈ 'ಭಕ್ತಿಸುಧಾತರಂಗಿಣೀ'. ಪರಮಾತ್ಮನ ಅನುಗ್ರಹವಾಗಬೇಕಾದರೆ ಗುರುವಿನ ಅನುಗ್ರಹವಿರಲೇಬೇಕು. ಈ ಸ್ತೋತ್ರಗಳು ಶ್ರೀಶ್ರೀಗಳ ಅನುಗ್ರಹವೆಂದು ತಿಳಿದು ಪಠಿಸಿದರೆ ಸಕಲ ಇಷ್ಟಾರ್ಥಗಳೂ ಸಿದ್ಧಿಸುವುವು.
Device | White | Black | Red | Green |
---|---|---|---|---|
Chair | 14-14.5 | 15-15.5 | 16-16.5 | 17-17.5 |
Moniter | 14-14.5 | 15-15.5 | 16-16.5 | 17-17.5 |
Keycaps | 14-14.5 | 15-15.5 | 16-16.5 | 17-17.5 |
CPU | 14-14.5 | 15-15.5 | 16-16.5 | 17-17.5 |
Mouse | 14-14.5 | 15-15.5 | 16-16.5 | 17-17.5 |