-
My Cart:
Rs. 0.00 0My Cart
0 ItemsYour cart is empty
ಸುಭಾಷಿತಗಳು ಬಿಡಿಶ್ಲೋಕಗಳಾದರೂ ಉತ್ತಮ ಕಾವ್ಯದಂತೆ ರಮಣೀಯವಾಗಿರುತ್ತವೆ; ಧರ್ಮಶಾಸ್ತ್ರದಂತೆ ನೀತಿಬೋಧಕವಾಗಿರುತ್ತವೆ; ಅರ್ಥಶಾಸ್ತ್ರದಂತೆ ಲೋಕವ್ಯವಹಾರವನ್ನು ಬೋಧಿಸುತ್ತವೆ; ಚಾಟಿಏಟುಗಳಂತಿರುವ ಚಾಟುಶ್ಲೋಕಗಳಂತೂ ಹೃದಯವನ್ನು ಅರಳಿಸಿ ಓದುಗರನ್ನು ಸನ್ಮಾರ್ಗಕ್ಕೆ ತಿರುಗಿಸುತ್ತವೆ. 'ಅವಸರಪಠಿತಾ ವಾಣೀ ಗುಣಗಣರಹಿತಾಪಿ ಶೋಭತೇ ಪುಂಸಾಮ್' ಎಂಬಂತೆ ಸಂದರ್ಭೋಚಿತವಾಗಿ ಬಳಸುವ ಸುಭಾಷಿತಗಳು ಮಾತಿನ ಶೋಭೆಯನ್ನು ಹೆಚ್ಚಿಸುತ್ತವೆ. ಆದ್ದರಿಂದ ಪ್ರವಚನಕಾರರು, ಯಕ್ಷಗಾನ ಅರ್ಥಧಾರಿಗಳು, ಹರಿಕತೆಯ ದಾಸರು, ಸಂಭಾಷಣ ಚತುರರು-ಹೀಗೆ ಎಲ್ಲರಿಗೂ ಸುಭಾಷಿತಗಳು ಸಾಂದರ್ಭಿಕವಾಗಿ ಒಂದಲ್ಲ ಒಂದು ರೀತಿಯಿಂದ ಸಹಕಾರಿಗಳಾಗಿವೆ. ಸುಭಾಷಿತಗಳ ಈ ಮಹಾಸಾಗರದಿಂದ ಧಾರ್ಮಿಕತೆಗೆ ಒತ್ತು ನೀಡುವ ಕೇವಲ ೬೦೬ ಸುಭಾಷಿತಗಳನ್ನು ಮಾತ್ರ ಇಲ್ಲಿ ಅನುವಾದ ಸಹಿತ ನೀಡಲಾಗಿದೆ. ಆರಂಭದ ಇಪ್ಪತ್ತು ಶ್ಲೋಕಗಳಲ್ಲಿ ಸುಭಾಷಿತಗಳ ಮಹತ್ತ್ವವನ್ನು ವಿವರಿಸಿ, ನಂತರ ಜೀವನ ಮೌಲ್ಯಗಳನ್ನು ಬೋಧಿಸುವ ಧಾರ್ಮಿಕ ಸುಭಾಷಿತಗಳನ್ನು ಪ್ರಕಟಿಸಲಾಗಿದೆ. ಇಲ್ಲಿ ಸಂಗ್ರಹಿಸಲಾದ ಶ್ಲೋಕಗಳಲ್ಲಿ ಧರ್ಮವಿದೆ; ನೀತಿ ಇದೆ; ಚಮತ್ಕಾರವಿದೆ; ಜೀವನ ಮೌಲ್ಯಗಳಿವೆ. ಎಲ್ಲಾ ಶ್ಲೋಕಗಳಿಗೂ ಅನುವಾದವನ್ನು ನೀಡಿರುವುದರಿಂದ ಕನ್ನಡಿಗರೆಲ್ಲರಿಗೂ ಸುಲಭ ಗ್ರಾಹ್ಯವಾಗಿವೆ.
Device | White | Black | Red | Green |
---|---|---|---|---|
Chair | 14-14.5 | 15-15.5 | 16-16.5 | 17-17.5 |
Moniter | 14-14.5 | 15-15.5 | 16-16.5 | 17-17.5 |
Keycaps | 14-14.5 | 15-15.5 | 16-16.5 | 17-17.5 |
CPU | 14-14.5 | 15-15.5 | 16-16.5 | 17-17.5 |
Mouse | 14-14.5 | 15-15.5 | 16-16.5 | 17-17.5 |