-
My Cart:
Rs. 0.00 0My Cart
0 ItemsYour cart is empty
ರಾಮಾಯಣ ಮಹಾಕಾವ್ಯ ವಾಹಿನಿಯು ಗಂಗಾ ಪ್ರವಾಹದಂತೆ ಪ್ರಶಾಂತವಾಗಿ, ಗಂಭೀರವಾಗಿ ಸಾಗಿ ಮಾನವೀಯತೆಯ ಮಹತ್ವಿಕೆಯನ್ನು ಜಗತ್ತಿಗೆ ತನ್ನ ನಡೆ-ನುಡಿ-ಕೃತಿಗಳಿಂದ ಮನವರಿಕೆ ಮಾಡಿಕೊಡುವ ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರನ ಚರಿತ್ರೆಯನ್ನು ಕುರಿತದ್ದು. ಮಹಾಭಾರತವು ಮಹತ್ವ, ತೂಕ ಎರಡನ್ನೂ ಹೊಂದಿರುವ ಗ್ರಂಥ. ಯುಗಧರ್ಮಕ್ಕನುಗುಣವಾಗಿ ರಾಜಸ, ತಾಮಸ ಗುಣಧರ್ಮಗಳಿಂದ ಕೂಡಿದ ರಾಜಕಾರಣ, ಜನಜೀವನ, ವ್ಯವಹಾರ ಮುಂತಾದ ಎಲ್ಲ ಪ್ರಾಪಂಚಿಕ ವಿಷಯಗಳ ಜೊತೆಗೆ ಅತ್ಯುಚ್ಚ ಧಾರ್ಮಿಕ ತತ್ತ್ವವನ್ನು (ಭಗವದ್ಗೀತೆ) ಬೋಧಿಸುವ ಮಹಾಕಾವ್ಯ ಇದರ ಮಹತ್ವಿಕೆಯನ್ನು 'ಯದಿಹಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ ಕ್ವಚಿತ್'- ಈ ಕಥಾನಕದಲ್ಲಿ ಏನೆಲ್ಲ ವಿಷಯಗಳಿವೆಯೋ ಅವು ಬೇರೆ ಗ್ರಂಥಗಳಲ್ಲಿಯೂ ಇವೆ. ಆದರೆ ಈ ಮಹಾಭಾರತದಲ್ಲಿ ಇಲ್ಲದಿರುವ ವಿಷಯ ಬೇರೆ ಎಲ್ಲಿಯೂ ಇಲ್ಲ-ಎಂಬ ಸೂಕ್ತಿ ಅರ್ಥಪೂರ್ಣವಾಗಿ ತಿಳಿಸಿ ಹೇಳುತ್ತದೆ. ಹೀಗೆ ಭಾರತೀಯ ಸನಾತನ ವೈದಿಕ ಸಂಸ್ಕೃತಿಯ ಆಕರಗಳಾಗಿ ವಿಶ್ವಮಾನ್ಯತೆ ಪಡೆದ ಈ ಎರಡು ಮಹಾಕಾವ್ಯಗಳನ್ನು ಎರಡು ಸಾವಿರಕ್ಕೂ ಹೆಚ್ಚು ಪ್ರಶೋತ್ತರಗಳ ರೂಪದಲ್ಲಿ ರಚಿಸಿ ನರಸಿಂಹ ಮೂರ್ತಿಯವರು ಕನ್ನಡ ಸಾಹಿತ್ಯ ಪ್ರಕಾರಕ್ಕೆ ನೀಡಿರುವ ಕೊಡುಗೆ, ಮಾಡಿರುವ ಉಪಕಾರ ಅತ್ಯಮೂಲ್ಯವಾದುದು.
Device | White | Black | Red | Green |
---|---|---|---|---|
Chair | 14-14.5 | 15-15.5 | 16-16.5 | 17-17.5 |
Moniter | 14-14.5 | 15-15.5 | 16-16.5 | 17-17.5 |
Keycaps | 14-14.5 | 15-15.5 | 16-16.5 | 17-17.5 |
CPU | 14-14.5 | 15-15.5 | 16-16.5 | 17-17.5 |
Mouse | 14-14.5 | 15-15.5 | 16-16.5 | 17-17.5 |