-
My Cart:
Rs. 0.00 0My Cart
0 ItemsYour cart is empty
ತಮ್ಮ ಜೀವಿತಕಾಲದಲ್ಲಿಯೇ ಧರ್ಮಸಂಸ್ಥಾಪನಾ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿದ ಶ್ರೀಶಂಕರಾಚಾರ್ಯರು ಅದೈತತತ್ತ್ವ ಪ್ರತಿಪಾದಕವಾದ ಅನೇಕ ಗ್ರಂಥಗಳನ್ನು, ಬ್ರಹ್ಮಸೂತ್ರ, ಗೀತೆ, ಉಪನಿಷತ್ತುಗಳಿಗೆ ಭಾಷ್ಯಗಳನ್ನೂ ರಚಿಸಿದ್ದಲ್ಲದೆ ಭಕ್ತಿಭಾವಪೂರ್ಣವಾದ, ಅತ್ಯುತ್ತಮ ಕಾವ್ಯಗುಣಗಳುಳ್ಳ ಅನೇಕ ದೇವತಾ ಸ್ತೋತ್ರಗಳನ್ನು, ಅಸಂಖ್ಯ ಪ್ರಕರಣಗಳನ್ನೂ ರಚಿಸಿ ಲೋಕೋತ್ತರವಾದ ಕೀರ್ತಿಯನ್ನು ಗಳಿಸಿದರು. ಸುಮಾರು ಮೂವತ್ತೈದು ವರ್ಷಗಳ ಪೂರ್ವದಲ್ಲಿ ಇವುಗಳಲ್ಲಿ ಮುಖ್ಯವೂ, ಸುಂದರವೂ ಆದ ಹಲವನ್ನು ಆರಿಸಿಕೊಂಡು ಶ್ರೀ ಶೃಂಗೇರಿ ಉಭಯ ಜಗದ್ಗುರು ಮಹಾಸ್ವಾಮಿಗಳವರ ಅನುಗ್ರಹಕ್ಕೆ ಪಾತ್ರರಾಗಿದ್ದ ದಿವಂಗತ ವಿದ್ವಾನ್ ಶ್ರೀ ಚಿ.ನಾ.ವಿಶ್ವನಾಥ ಶಾಸ್ತ್ರಿಗಳು ಅನುವಾದ ಸಹಿತವಾಗಿ ಶಾಂಕರಸ್ತೋತ್ರ ಮುಕ್ತಾವಲಿಃ ಎಂಬ ಪುಸ್ತಕರೂಪದಲ್ಲಿ ಸಂಗ್ರಹಿಸಿದರು. ಇಂದು ಜನರಿಗೆ ಸಮಯವು ಅಲ್ಪವಾಗಿರುವುದರಿಂದ ಆ ಸ್ತೋತ್ರಗಳನ್ನು ಅನುಸಂಧಾನ ಮಾಡಲು ಅನುಕೂಲವಾಗುವಂತೆ ಚಿಕ್ಕ ಪುಸ್ತಕದ ರೂಪದಲ್ಲಿ ಪ್ರಕಟಿಸುತ್ತಿದ್ದೇವೆ. ಪ್ರಕೃತ ಆ ಸ್ತೋತ್ರಗಳಲ್ಲೊಂದಾದ ಶಿವಾನಂದಲಹರೀ ಸ್ತೋತ್ರವನ್ನು ಅನುವಾದಸಹಿತವಾಗಿ ಪ್ರಕಾಶಗೊಳಿಸುತ್ತಿದ್ದೇವೆ. ಉತ್ತಮವಾದ, ಅತ್ಯಂತ ಹೃದ್ಯವಾದ ಗಾನಶೈಲಿಯಿಂದ ಕೂಡಿರುವ ಶಂಕರಾಚಾರ್ಯರ ಈ ಕೃತಿಯಿಂದ ಆಸ್ತಿಕ ಮಹಾಶಯರು ಶ್ರೇಯೋಭಾಜನರಾಗಲೆಂದು ಪ್ರಕಾಶಕರ ಆಶಯವಾಗಿರುತ್ತದೆ.
Device | White | Black | Red | Green |
---|---|---|---|---|
Chair | 14-14.5 | 15-15.5 | 16-16.5 | 17-17.5 |
Moniter | 14-14.5 | 15-15.5 | 16-16.5 | 17-17.5 |
Keycaps | 14-14.5 | 15-15.5 | 16-16.5 | 17-17.5 |
CPU | 14-14.5 | 15-15.5 | 16-16.5 | 17-17.5 |
Mouse | 14-14.5 | 15-15.5 | 16-16.5 | 17-17.5 |