-
My Cart:
Rs. 0.00 0My Cart
0 ItemsYour cart is empty
ಭಗವಂತನ ಸ್ತೋತ್ರಗಳಲ್ಲಿ ಅಥರ್ವಣ ರಹಸ್ಯದಲ್ಲಿ ಮೂವತ್ತು ಶ್ಲೋಕಗಳುಳ್ಳ ಶ್ರೀನಾರಾಯಣ ಸ್ತೋತ್ರ ಮತ್ತು ನೂರೆಂಟು ಶ್ಲೋಕಗಳುಳ್ಳ ಶ್ರೀಲಕ್ಷ್ಮೀ ಸ್ತೋತ್ರ ಇವೆರಡು ಲಕ್ಷ್ಮೀನಾರಾಯಣಹೃದಯ' ಎಂಬ ಹೆಸರಿನಿಂದ ಪ್ರಸಿದ್ಧವಾಗಿವೆ. ಈ ಸ್ತೋತ್ರವು ಸಂಕಲೀಕರಣ, ಸಂಪುಟೀಕರಣ, ಸಕೃದಾವರ್ತನ ಮೊದಲಾದ ಅನೇಕ ಪ್ರಕಾರಗಳಿಂದ ಜಪ ಹೋಮಾದಿಗಳಲ್ಲಿ ವಿನಿಯುಕ್ತವಾಗಿ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವುದರಲ್ಲಿ ಕಲ್ಪವೃಕ್ಷ ಸದೃಶವಾಗಿದೆ. ಇಂತಹ ಲಕ್ಷ್ಮೀ ನಾರಾಯಣಹೃದಯವನ್ನು ಶ್ರೀಮಠದ ಸರಸ್ವತೀ ಭಂಡಾರದಲ್ಲಿರುವ ಅನೇಕ ತಾಳಪತ್ರಾದಿ ಗ್ರಂಥಗಳನ್ನು ಪರಿಶೀಲಿಸಿ, ಚೆನ್ನಾಗಿ ಪರಿಷ್ಕರಿಸಿ ಪ್ರಕಾಶಿಸಲಾಗುತ್ತಿದೆ. ಇದರಲ್ಲಿ ಲಕ್ಷ್ಮೀನಾರಾಯಣ-ರಾಮ-ಕೃಷ್ಣ-ನರಸಿಂಹ-ವೆಂಕಟೇಶಾದಿ ಅಷ್ಟೋತ್ತರ ಶತನಾಮಗಳನ್ನೂ, ಅನೇಕ ಸ್ತೋತ್ರಗಳನ್ನೂ ಸೇರಿಸಲಾಗಿದೆ. ಈ ಗ್ರಂಥವು ಉಪಾಸಕರಿಗೆ ಬಹಳ ಉಪಯುಕ್ತವಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಈ ಗ್ರಂಥದ ಸಂಪಾದನೆ ಮತ್ತು ಪರಿಷ್ಕಾರಾದಿ ಕಾರ್ಯವನ್ನು ತಂಗಿರಾಲ ಶಿವಕುಮಾರ ಶರ್ಮಾ ಹಾಗೂ ತಂಗಿರಾಲ ಸೀತಾರಾಮ ಶರ್ಮರೂ ಶ್ರದ್ಧೆಯಿಂದ ಮಾಡಿರುತ್ತಾರೆ.
Device | White | Black | Red | Green |
---|---|---|---|---|
Chair | 14-14.5 | 15-15.5 | 16-16.5 | 17-17.5 |
Moniter | 14-14.5 | 15-15.5 | 16-16.5 | 17-17.5 |
Keycaps | 14-14.5 | 15-15.5 | 16-16.5 | 17-17.5 |
CPU | 14-14.5 | 15-15.5 | 16-16.5 | 17-17.5 |
Mouse | 14-14.5 | 15-15.5 | 16-16.5 | 17-17.5 |