-
My Cart:
Rs. 0.00 0My Cart
0 ItemsYour cart is empty
ಶಂಕರಾಚಾರ್ಯರನ್ನು ಶ್ರದ್ಧಾಭಕ್ತಿ ಪುರಸ್ಸರವಾಗಿ ಪೂಜಿಸುವ ಎಲ್ಲಾ ಭಕ್ತರ ಸಕಲ ಅಭೀಷ್ಟಗಳೂ ನೆರವೇರುತ್ತವೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ ಅದಕ್ಕಾಗಿ ಒಂದು ಸರಿಯಾದ ಪೂಜಾಕಲ್ಪದ ಅವಶ್ಯಕತೆಯಿದೆ. ನಮ್ಮ ಪರಮೇಷ್ಠಿಗುರುಗಳು, ಪ್ರಾತಃಸ್ಮರಣೀಯರಾದ ಜಗದ್ಗುರು ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳವರ ಪರಮಾನುಗ್ರಹಕ್ಕೆ ಪಾತ್ರರಾದ, ಸತತವಾಗಿ ಪ್ರಸ್ಥಾನತ್ರಯ ಭಾಷ್ಯಗಳ ಪಾರಾಯಣ ಮತ್ತು ಪ್ರವಚನಗಳನ್ನು ಮಾಡುತ್ತಿದ್ದುದರಿಂದ ಭಾಷ್ಯಸ್ವಾಮಿಗಳೆಂದೇ ಪ್ರಸಿದ್ಧರಾದವರು ಶ್ರೀಸಚ್ಚಿದಾನಂದತೀರ್ಥಸ್ವಾಮಿಗಳು. ಅವರು ಅತಿಮಧುರವಾದ, ಸರಸವಾದ ಶ್ಲೋಕಗಳಿಂದ ಶ್ರೀಶಂಕರಭಗವತ್ಪಾದರ ಪೂಜಾಕಲ್ಪವನ್ನೂ, ಪವಿತ್ರವಾದ ಶಂಕರರ ಚರಿತ್ರೆಯನ್ನು ನೆನಪಿಸುವ ಸಹಸ್ರನಾಮ ಸ್ತೋತ್ರವನ್ನೂ, ಸೇವಾಪದ್ಯಾವಳಿ ಮೊದಲಾದವುಗಳನ್ನೂ ರಚಿಸಿದ್ದಾರೆ. ಈ ಪೂಜಾಕಲ್ಪವು ನಿತ್ಯ ಪೂಜೆಯಲ್ಲಿ ಮತ್ತು ಶ್ರೀಶಂಕರಜಯಂತಿ ಉತ್ಸವಾದಿ ವಿಶೇಷ ಸಂದರ್ಭಗಳಲ್ಲೂ ಅತ್ಯಂತ ಉಪಯುಕ್ತವಾಗಿದೆ.
Device | White | Black | Red | Green |
---|---|---|---|---|
Chair | 14-14.5 | 15-15.5 | 16-16.5 | 17-17.5 |
Moniter | 14-14.5 | 15-15.5 | 16-16.5 | 17-17.5 |
Keycaps | 14-14.5 | 15-15.5 | 16-16.5 | 17-17.5 |
CPU | 14-14.5 | 15-15.5 | 16-16.5 | 17-17.5 |
Mouse | 14-14.5 | 15-15.5 | 16-16.5 | 17-17.5 |