-
My Cart:
Rs. 0.00 0My Cart
0 ItemsYour cart is empty
ಗೀತಾ ಸುಗೀತಾ ಕರ್ತವ್ಯಾ ಕಿಮನ್ನೈ: ಶಾಸ್ತ್ರವಿಸ್ತರೈ: |
ಯಾ ಸ್ವಯಂ ಪದ್ಮನಾಭಸ್ಯ ಮುಖಪದ್ಮಾದ್ವಿನಿಃಸೃತಾ ॥ [ಮ.ಭಾ.ಭೀಷ್ಮಪರ್ವ-43-1]
"ಗೀತೆಯೊಂದನ್ನೇ ಚೆನ್ನಾಗಿ ಶ್ರವಣ, ಮನನ, ಧಾರಣ ಮಾಡಿದರೆ ಸಾಕು; ಬೇರೆ ಶಾಸ್ತ್ರಗಳನ್ನು ನೋಡಬೇಕಾಗಿಲ್ಲ. ಏಕೆಂದರೆ ಇದು ಸ್ವತಃ ಪರಮಾತ್ಮನ ಮುಖಾರವಿಂದದಿಂದ ಹೊರಬಂದಿದೆ." ಹೀಗೆ ಭಗವದ್ಗೀತೆಯ ಮಹಿಮೆಯನ್ನು ಮಹಾಭಾರತದಲ್ಲಿ ಸಾಕಷ್ಟು ವರ್ಣಿಸಲಾಗಿದೆ. ಕುರುಕ್ಷೇತ್ರದಲ್ಲಿ ಗೀತೆಯು ಅವತರಿಸಿದಂದಿನಿಂದ ಇಂದಿನವರೆಗೂ ಅದು ಭಾರತೀಯ ಆಧ್ಯಾತ್ಮಿಕ ಪ್ರಪಂಚವನ್ನು ಆಳುತ್ತ ಬಂದಿದೆ. ದೇಶ ವಿದೇಶಗಳಲ್ಲಿಯೂ ತನ್ನ ಕಂಪನ್ನು ಸೂಸಿದೆ. ನಮ್ಮ ದೇಶದ ಸಾಧುಸಂತರು, ಸಮಾಜಸುಧಾರಕರು ಧರ್ಮಸುಧಾರಕರು ಎಲ್ಲರೂ ಗೀತೆಯನ್ನು ಕುರಿತು ಆಡಿದವರೆ, ಬರೆದವರೆ. ಎಲ್ಲ ಮತಾಚಾರ್ಯರು ಭಗವದ್ಗೀತೆಗೆ ತಮ್ಮ ಸಿದ್ಧಾಂತಗಳಿಗೆ ಅನುಗುಣವಾಗಿ ಭಾಷ್ಯವನ್ನು ರಚಿಸಿದ್ದಾರೆ. ಉಪನಿಷತ್ತುಗಳ ತತ್ತ್ವವನ್ನು ತಿಳಿಸಿಕೊಡುವ ಭಗವದ್ಗೀತೆಯು ಶ್ರೇಯೋ ಮಾರ್ಗಕ್ಕೆ ಉತ್ತಮ ಸೋಪಾನವಾಗಿದೆ.
Device | White | Black | Red | Green |
---|---|---|---|---|
Chair | 14-14.5 | 15-15.5 | 16-16.5 | 17-17.5 |
Moniter | 14-14.5 | 15-15.5 | 16-16.5 | 17-17.5 |
Keycaps | 14-14.5 | 15-15.5 | 16-16.5 | 17-17.5 |
CPU | 14-14.5 | 15-15.5 | 16-16.5 | 17-17.5 |
Mouse | 14-14.5 | 15-15.5 | 16-16.5 | 17-17.5 |