Back
Centre for Brahmavidya, Chennai

Sringeri Shankaracharyaru Paramapujya Jagadguru Sri Bharati Tirtha Mahaswamigalu Animated

Books

ಶೃಂಗೇರಿ ಶ್ರೀ ಶಾರದಾ ಪೀಠದ 36ನೇ ಪೀಠಾಧೀಶ್ವರರಾದ ಪರಮ ಪೂಜ್ಯ ಜಗದ್ಗುರು ಶಂಕರಾಚಾರ್ಯ ಅನಂತಶ್ರೀ-ವಿಭೂಷಿತ ಭಾರತೀ ತೀರ್ಥ ಮಹಾಸ್ವಾಮಿಗಳವರು ಅನೇಕ ಶಾಸ್ತ್ರಗಳಲ್ಲಿ ಅನುಪಮ ವಿದ್ವಾಂಸರೆಂದು ವಿಶ್ವವಿಖ್ಯಾತರಾಗಿದ್ದಾರೆ. ತಮ್ಮ ಬಾಲ್ಯದಿಂದಲೂ ನಿಷ್ಠೆಯ ಶಾಸ್ತ್ರಬದ್ಧ ಜೀವನ, ಭಗವದ್ಭಕ್ತಿ,...

Quantity :
Rs. 50.00
X

Notify me when Sringeri Shankaracharyaru Paramapujya Jagadguru Sri Bharati Tirtha Mahaswamigalu Animated - Default Title becomes available.

DESCRIPTION:

ಶೃಂಗೇರಿ ಶ್ರೀ ಶಾರದಾ ಪೀಠದ 36ನೇ ಪೀಠಾಧೀಶ್ವರರಾದ ಪರಮ ಪೂಜ್ಯ ಜಗದ್ಗುರು ಶಂಕರಾಚಾರ್ಯ ಅನಂತಶ್ರೀ-ವಿಭೂಷಿತ ಭಾರತೀ ತೀರ್ಥ ಮಹಾಸ್ವಾಮಿಗಳವರು ಅನೇಕ ಶಾಸ್ತ್ರಗಳಲ್ಲಿ ಅನುಪಮ ವಿದ್ವಾಂಸರೆಂದು ವಿಶ್ವವಿಖ್ಯಾತರಾಗಿದ್ದಾರೆ. ತಮ್ಮ ಬಾಲ್ಯದಿಂದಲೂ ನಿಷ್ಠೆಯ ಶಾಸ್ತ್ರಬದ್ಧ ಜೀವನ, ಭಗವದ್ಭಕ್ತಿ, ಸುತೀಕ್ಷ್ಣ ಬುದ್ಧಿವಂತಿಕೆ, ವಿನಮ್ರತೆ, ನಿರ್ಲಿಪ್ತತೆ ಮತ್ತು ವಿದ್ಯೆದ ತೀವ್ರ ನಿರಂತರ ಬಯಕೆ — ಇವೆಲ್ಲವನ್ನೂ ತಮ್ಮ ವ್ಯಕ್ತಿವ್ತದಲ್ಲಿ ಸಿದ್ಧಪಡಿಸಿದ ಅವರು, ಪರಮ ಪೂಜ್ಯ ಜಗದ್ಗುರು ಶಂಕರಾಚಾರ್ಯ ಅನಂತಶ್ರೀ-ವಿಭೂಷಿತ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳ ಪಾದಾರವಿಂದಗಳಲ್ಲಿ ಆಶ್ರಯವನ್ನು ಪಡೆದುದು, ಅವರಿಂದ ಸಂನ್ಯಾಸಾಶ್ರಮದ ಅನುಗ್ರಹವನ್ನು ಪಡೆದುದು, ಅವರ ಅಡಿದಾವರೆಗಳಲ್ಲಿ ತರ್ಕ ಮತ್ತು ವೇದಾಂತ ಶಾಸ್ತ್ರಗಳ ಸಮಗ್ರ ಅಧ್ಯಯನ ಮಾಡಿದುದು ಮುಂತಾದ ವಿವರಗಳು ಈ ಮನೋಹರವಾದ ಚಿತ್ರಾತ್ಮಕ ಪುಸ್ತಕದಲ್ಲಿ ಇವೆ. ಭಾರತಾದ್ಯಂತ ಅನೇಕ ಬಾರಿ ಪರಮಪೂಜ್ಯರು ಕೈಗೊಂಡ ವಿಜಯ ಯಾತ್ರೆಗಳು, ಸಂಸ್ಕೃತ, ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಅವರ ನಿರರ್ಗಳ ವಾಗ್ವೈಖರೀ, ಸಂಸ್ಕೃತ, ವೇದಗಳು ಮತ್ತು ಶಾಸ್ತ್ರಗಳ ಸಂರಕ್ಷಣೆಗಾಗಿ ಮಾತ್ರವಲ್ಲದೆ ಅವುಗಳ ಪ್ರಚಾರ-ಪ್ರಸಾರಕ್ಕಾಗಿ ಅವರ ಅನನ್ಯ ಸಕಾರಾತ್ಮಕ ಕಟಿಬದ್ಧತೆ, ಅವರ ಅನೇಕ ದೂರಗಾಮಿ ಧಾರ್ಮಿಕ ಮತ್ತು ಸಾಮಾಜಿಕ ಯೊಜನೆಗಳು, ಅಸಂಖ್ಯಾತ ಶಿಷ್ಯರಿಗೆ ಅವರು ತಮ್ಮ ಕರುಣಾಪೂರಿತ ಅನುಗ್ರಹವನ್ನು ದಯಪಾಲಿಸಿದುದು — ಈ ಎಲ್ಲ ಕಾರಣಗಳಿಂದಲೂ ಕೂಡ ಪರಮಪೂಜ್ಯರು ಸುಪ್ರಸಿದ್ಧರಾಗಿದ್ದಾರೆ. ಅತಿ ಸರಳವಾದ ಅವರ ಬೋಧನೆಗಳು ಸನಾತನ ಧರ್ಮದ ಮಾರ್ಗದಲ್ಲಿ ಎಂದಿಗೂ ನಡೆವಂತೆ ಸಾಮಾನ್ಯ ಜನರನ್ನು ಪರಿಣಾಮಕಾರಿಯಾಗಿ ಪ್ರೇರೇಪಿಸುತ್ತವೆ.

MORE:

Publisher: Centre for Brahmavidya, Chennai
Language: Kannada
Pages: 32
Weight: 140 g
Type: Books
SKU:
Binding: Paperback
Availability: In Stock

Recently Viewed Products

Sizing Guide

Device White Black Red Green
Chair 14-14.5 15-15.5 16-16.5 17-17.5
Moniter 14-14.5 15-15.5 16-16.5 17-17.5
Keycaps 14-14.5 15-15.5 16-16.5 17-17.5
CPU 14-14.5 15-15.5 16-16.5 17-17.5
Mouse 14-14.5 15-15.5 16-16.5 17-17.5